You are hereNews

News


News about KKNC.ORG

ಸ್ವರ್ಣಸೇತು 2013

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(ಕೆ.ಕೆ.ಎನ್.ಸಿ), ರತ್ನ ಮಹೋತ್ಸವದ ಅಂಗವಾಗಿ, ಅಮೇರಿಕಾದ ಉದ್ದಗಲಕ್ಕೂ ಕಥಾಸ್ಪರ್ಧೆಯನ್ನು ಘೋಷಿಸಿದೆ. ಕೆ.ಕೆ.ಎನ್.ಸಿ ಪ್ರತಿ ವರ್ಷವೂ ಬಿಡುಗಡೆ ಮಾಡುವ ’ಸ್ವರ್ಣಸೇತು’ ಸಂಚಿಕೆಯಲ್ಲಿ ಆಯ್ದ ಕಥೆಗಳನ್ನು ಪ್ರಕಟಿಸಲಾಗುತ್ತದೆ.

ಕಥಾಸ್ಪರ್ಧೆಯ ನಿಬಂಧನೆಗಳು ಹೀಗಿದೆ:

- ಕಥೆಯು ಕನ್ನಡದಲ್ಲಿರಬೇಕು ಮತ್ತು ಆರು ಪುಟ ಮೀರಬಾರದು.
- ಕಥೆಯು ಸ್ವಂತದ್ದಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
- ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
- ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಸ್ವರ್ಣಸೇತು 2013 ಸಂಚಿಕೆ ಪ್ರಕಟಣೆಯಾಗುವವರೆಗೂ ಬೇರೆಲ್ಲೂ (ಬ್ಲಾಗ್ ಸೇರಿದಂತೆ) ಪ್ರಕಟಿಸುವಂತಿಲ್ಲ.
- ಕಥೆಗಳು ಯೂನಿಕೋಡ್/ತುಂಗಾ ಫಾಂಟ್ ನಲ್ಲಿ, MS-Wordನಲ್ಲಿ ಫಾಂಟ್ ಸೈಜ ೧೨ರಲ್ಲಿ ಕಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಕಳಿಸಿದ ಕಥೆಗಳಲ್ಲಿ ಹೆಚ್ಚಾಗಿ ಕಾಗುಣಿತ/ವ್ಯಾಕರಣ ದೋಷಗಳಿದ್ದಲ್ಲಿ, ಸ್ಪರ್ಧೆಗೆ ಪರಿಗಣಿಸುವುದಿಲ್ಲ.
- ಅಮೆರಿಕಾದ ಹೊರಗಿರುವ ಬರಹಗಾರರಿಗೆ ಅವಕಾಶವಿಲ್ಲ.
- ನಿಮ್ಮ ಕಥೆಗಳನ್ನು 5 ನೇ ಎಪ್ರಿಲ್ 2013 ರ ಒಳಗೆ ಕಳಿಸತಕ್ಕದ್ದು.
- ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಕಳಿಸುವ ಹಾಗಿಲ್ಲ.
- ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನಾದರೂ ಸ್ವರ್ಣಸೇತು-2013ರಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.
ಕಥೆಯೊಂದಿಗೆ ನಿಮ್ಮ ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸತಕ್ಕದ್ದು.
- ನಿಮ್ಮ ಕಥೆಗಳನ್ನು [email protected] ಗೆ ಕಳಿಸಿ.
- ತೀರ್ಪುಗಾರರ ನಿರ್ಧಾರವೇ ಅಂತಿಮ.

ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ !!!

ಜಾನಪದ ಸೊಗಡಿನ ಹಿರಿಯ ಸಾಹಿತಿ, ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಡಾ. ಚಂದ್ರಶೇಖರ ಕಂಬಾರ ಅವರು ದೇಶದ ಅತಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೃಷಿ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಇನ್ನೊಂದು ಹೆಗ್ಗಳಿಕೆ.
ಕೆ.ಕೆ.ಎನ್.ಸಿ ವತಿಯಿಂದ ಡಾ. ಚಂದ್ರಶೇಖರ ಕಂಬಾರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

Social Media

Grand Annual Sponsor

Gold Sponsor

Sponsor